ಹಿಂದಿನ ಸಂಚಿಕೆಯಲ್ಲಿ 'ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ?' ಎಂಬ ವಿಷಯಕ್ಕೆ ಸಂಬಂಧ ಪಟ್ಟಂತೆ ನಾನು ಕೆಲವು ಪ್ರಕರಣಗಳನ್ನು ವಿವರಿಸಿದ್ದೆ.
ನಾನು ಅವರಿಗೆ ಯಾವ ರೀತಿಯಲ್ಲಿ ಉತ್ತರಿಸಿದೆ ಎಂದು ಹೇಳುವ ಮೊದಲು ಸಂಸ್ಕೃತದ ಒಂದು ಸುಭಾಷಿತವನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ.
'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ.
'ಪ್ರಿಯಂ ಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನಃ'
ಹಾಗೆಂದರೆ
'ಸತ್ಯವನ್ನೇ ಹೇಳಬೇಕು ಹಾಗೂ ಪ್ರಿಯವಾದುದನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗಿರುತ್ತದೆ ಎಂಬ ಕಾರಣಕ್ಕೆ ಸುಳ್ಳನ್ನೂ ಹೇಳಬಾರದು, ಇದೇ ಸನಾತನವಾದ ಧರ್ಮ' ಇಲ್ಲಿ 'ಧರ್ಮ'ವೆಂದರೆ 'ನಡೆದುಕೊಳ್ಳಬೇಕಾದ ರೀತಿ.'
ಈ ಸುಭಾಷಿತ ಅತ್ಯಂತ ಅರ್ಥಪೂರ್ಣವಾದ ಸುಭಾಷಿತ. ಸತ್ಯವನ್ನು ಹೇಳುವ ಭರದಲ್ಲಿ ಮನಸ್ಸಿಗೆ ನೋವು ಕೊಡುವ ಅಥವಾ ಹಿತವಲ್ಲದ ಸತ್ಯವನ್ನು ಮೈ ಮೇಲೆ ಬಿದ್ದು ಹೇಳುವ ಅಗತ್ಯವಿಲ್ಲ. ಇತರರಿಗೆ ಖುಷಿ ನೀಡುತ್ತದೆ ಎಂಬ ಕಾರಣಕ್ಕಾಗಿ ಅನಗತ್ಯವಾಗಿ ಸುಳ್ಳನ್ನು ಹೇಳುವ ಅಗತ್ಯವೂ ಇಲ್ಲ.
ಇನ್ನೊಬ್ಬರಿಗೆ ಹಾನಿ ತರುವ ಸತ್ಯ ಅಸತ್ಯಕ್ಕಿಂತ ಘೋರವಾಗಿರುತ್ತದೆ. ಒಂದು ಸಣ್ಣ ಕತೆಯನ್ನು ಉದಾಹರಣೆಯಾಗಿ ಹೇಳುತ್ತೇನೆ.
ಸತ್ಯವನ್ನೇ ಹೇಳುವ ಒಬ್ಬ ಋಷಿ ತನ್ನ ಆಶ್ರಮದ ಮುಂದೆ ಮರವೊಂದರ ನೆರಳಲ್ಲಿ ಕುಳಿತಿರುತ್ತಾನೆ. ಅಮಾಯಕನೊಬ್ಬ ಓಡೋಡಿ ಬಂದು ಆ ಮರದ ಹಿಂದಿರುವ ಪೊಟರೆಯಲ್ಲಿ ಅವಿತುಕೊಳ್ಳುತ್ತಾನೆ. ಕೈಯಲ್ಲಿಮಚ್ಚು,ಕತ್ತಿಗಳನ್ನು ಹಿಡಿದುಕೊಂಡು ವೀರಾವೇಶದಿಂದ ಒಂದಷ್ಟು ದರೋಡೆಕೋರರು ಅದೇ ಸ್ಥಳಕ್ಕೆ ಧಾವಿಸಿ ಬರುತ್ತಾರೆ ಹಾಗೂ ಸತ್ಯಸಂಧನಾದ ಆ ಋಷಿಯ ಬಳಿ ಕೇಳುತ್ತಾರೆ 'ಸ್ವಾಮೀ ಇಲ್ಲಿ ಯಾರಾದರೂ ಓಡುತ್ತಾ ಬಂದಿದ್ದರೇ, ನೀವೇನಾದರೂ ನೋಡಿದಿರಾ ?
ಅದಕ್ಕೆ ಸತ್ಯವೃತನಾದ ಆ ಋಷಿ 'ಹೌದು ನೋಡಿದ್ದೇನೆ' ಎಂದು ಹೇಳುತ್ತಾನೆ.
'ಯಾವ ಕಡೆಗೆ ಹೋದ?' ದರೋಡೆಕೋರರಲ್ಲೊಬ್ಬ ಕೇಳುತ್ತಾನೆ.
'ಇದೋ, ಈ ಮರದ ಹಿಂದಿರುವ ಪೊಟರೆಯಲ್ಲಿ ಕುಳಿತಿದ್ದಾನೆ' ಸತ್ಯವನ್ನೇ ನುಡಿಯುತ್ತಾನೆ ಸತ್ಯವಂತನಾದ ಆ ಮಹಾಋಷಿ.
ದರೋಡೆಕೋರರು ಪೊಟರೆಯಲ್ಲಿ ಅವಿತಿರುವ ಆತನನ್ನು ಹೊರಗೆಳೆದು ಬರ್ಬರವಾಗಿ ಹತ್ಯೆಗೈದು ಆತನ ಹಣವನ್ನು ಲೂಟಿ ಮಾಡಿ ಪರಾರಿಯಾಗುತ್ತಾರೆ.
'ಸತ್ಯ ಹರಿಶ್ಚಂದ್ರನಂತೆಯೇ ಸತ್ಯವನ್ನು ಎಂತಹ ಸಂದರ್ಭದಲ್ಲಿಯೂ ಹೇಳಲೇ ಬೇಕಾ?' ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಆ ಅಮಾಯಕನ ಸಾವಿಗೆ ಸತ್ಯವೃತನಾದ ಋಷಿಯೇ ಕಾರಣನಾದ.
ಮೇಲೆ ಉದಹರಿಸಿದ ಸುಭಾಷಿತ, ಇಂತಹ ಕೆಲವು ಕ್ಲಿಷ್ಟ ಸಂದರ್ಭಗಳಲ್ಲಿ ನೆನಪಿಸಿಕೊಳ್ಳಬೇಕಾದ ಸುಭಾಷಿತ.
ಅಪರಿಚಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮಾತನಾಡಿದ, ಹೇಳಿದ ಒಂದು ಅತ್ಯುತ್ತಮ ಉದಾಹರಣೆಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರಿಸುತ್ತೇನೆ. ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿ ....

No comments:
Post a Comment