.. ನಂತರದ ದಿನಗಳು ನನ್ನ ಜೀವನದ ಸುವರ್ಣ ದಿನಗಳು. ನಾನು ಹೇಗಿದ್ದೇನೆಂಬ ಅರಿವು ನನಗಿರದಿದ್ದರೂ 'ಎಷ್ಟು ಮುದ್ದಾಗಿದೆ ನೋಡು' 'ಪುಟಾಣಿ ಪುಟ್ಟು' 'ಮುದ್ದು ಬಿಲ್ಲಿ' ಎಂದೆಲ್ಲಾ ಕರೆಯುತ್ತಿದ್ದುದರಿಂದ ನಾನೊಂದು ಚೆಂದವಾದ ಬೆಕ್ಕಿನಮರಿಯಾಗಿರಬಹುದೇನೋ ಎಂದೆನಿಸುತ್ತಿತ್ತು.
'ಆ' ಮನೆಯವರು ನನ್ನನ್ನು 'ಬಿಲ್ಲಿ ಬಿಲ್ಲಿ' ಎಂದು ಕರೆಯುತ್ತಿದ್ದರು. ಪಕ್ಕದಮನೆಗೆ ಹೋದಾಗ ಅವರು ನನ್ನನ್ನು 'ರೋಜಿ' ಎಂದು ಕರೆಯುತ್ತಿದ್ದರು. ಸುತ್ತಮುತ್ತಲಿನ ಮನೆಗಳಲ್ಲಿ ನಾನೊಂದು ಆಕರ್ಷಣೆಯ ಬಿಂದುವಾಗಿದ್ದೆ. ಇದನ್ನು ಗರ್ವದಿಂದಲ್ಲ, ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಎಲ್ಲ ಮನೆಯವರು ನನಗೆ ವಿಧವಿಧದ ತಿಂಡಿತೀರ್ಥಗಳನ್ನು ಕೊಡುತ್ತಿದ್ದರು.
ಆದರೆ ನಾನು ಬೆಳಗಿನ ಬ್ರೇಕ್ ಫಾಸ್ಟ್ ಮಾಡಲು 'ಆ' ಮನೆಯ ಬಳಿಯೇ ಕಾಯುತ್ತಿದ್ದೆ. ಅವರು ಮಂಗಳೂರಿಗರಾಗಿದ್ದರಿಂದ ಒಣಮೀನನ್ನು ನೀರಿನಲ್ಲಿ ನೆನೆಸಿ ಮೃದುವಾಗಿಸಿ ಕೊಡುತ್ತಿದ್ದರು. ನಂತರ ಹಾಲು ಕುಡಿಯಲು ಕೊಡುತ್ತಿದ್ದರು. ಅವರು ಕೊಡದಿದ್ದರೆ ನಾನು ಹಠ ಮಾಡುತ್ತಿದ್ದೆ. ಮನೆಯ ಮುಂದೆ ಧರಣಿ ಕೂತು 'ಮ್ಯಾವ್.. ಮ್ಯಾವ್' ಎಂದು ಕಿರುಚುತ್ತಲೇ ಇರುತ್ತಿದ್ದೆ.
ಗಂಡ ಅಥವಾ ಹೆಂಡತಿ ಅಥವಾ ಇಬ್ಬರೂ ಬಂದು ನನಗೆ ಅತಿಥಿ ಸೇವೆ ಮಾಡುತ್ತಿದ್ದರು. ಒಮ್ಮೊಮ್ಮೆ ತಿಂಡಿ ಕೊಡಲು ಆಟವಾಡಿಸುತ್ತಿದ್ದರು. ವಾರಾಂತ್ಯದಲ್ಲಿ ಅವರ ಮಗಳೂ ಬಂದು ಸೇರುತ್ತಿದ್ದಳು. ಅವಳು ಯಾವುದೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಅದೆಂತದೋ ಸೈಕಾಲಜಿಸ್ಟ್ ಎಂದು ಕೇಳಿದ ನೆನಪು. ಅವಳೂ ನನ್ನನ್ನು ಚೆನ್ನಾಗಿ ಗೋಳುಹುಯ್ಯುತ್ತಾ ಆಟವಾಡಿಸುತ್ತಿದ್ದಳು.
ನಾನೂ ಕೂಡಾ ನನ್ನದೇ ರೀತಿಯಲ್ಲಿ ಅವರೆಲ್ಲರನ್ನೂ ಆಟವಾಡಿಸುತ್ತಿದ್ದೆ. ನನ್ನ ಹಲ್ಲು ಹಾಗೂ ಉಗುರುಗಳು ಬೆಳೆಯತೊಡಗಿದ್ದವು. ಅದರ ಸದವಕಾಶವನ್ನು ಪಡೆದುಕೊಂಡ ನಾನು ಗಂಡನ ಸ್ಕೂಟರನ್ನು ಹತ್ತಿ ಸೀಟನ್ನು ಪರಪರನೆ ಕೆರೆಯುತ್ತಿದ್ದೆ. ನನ್ನನ್ನು ಹಿಡಿಯಲು ಬಂದಾಗ ಚಕ್ರದಡಿಯಿಂದ ನುಸುಳಿ, ಸೀಟಿನ ಮೇಲೆ ಎಗರಿ, ಕೆಳಗೆ ಹಾರಿ, ಸ್ಕೂಟರ್ ಸುತ್ತು ಹೊಡೆದು ಸುಸ್ತು ಹೊಡೆಸುತ್ತಿದ್ದೆ. ನಂತರ ಸ್ಕೂಟರಿನ ಮೇಲೆ ಮಹಾರಾಜನಂತೆ ಕುಳಿತುಕೊಳ್ಳುತ್ತಿದ್ದೆ. ರಾಜ್ಯವೊಂದನ್ನು ಗೆದ್ದಷ್ಟು ತೃಪ್ತಿ ನನಗಾಗ.
ನನಗೆ ತಿಂಡಿ ಕೊಡುತ್ತಾರೆ, ಹಾಲು ಕೊಡುತ್ತಾರೆ, ಮುದ್ದು ಮಾಡುತ್ತಾರೆ, ಆದರೂ ಮನೆಯ ಒಳಗೆ ಜಾಗ ಕೊಡಲು ಮಾತ್ರ ಸಿದ್ಧರಿರಲಿಲ್ಲ. ನನ್ನಿಂದ ಅವರು ಖುಷಿ ಪಟ್ಟುಕೊಳ್ಳುತ್ತಿದ್ದರೂ ಸಾಕಲು ಸಿದ್ಧರಿರಲಿಲ್ಲ. ಎಷ್ಟೇ ಆದರೂ ಸ್ವಾರ್ಥಿ ಮಾನವರು. ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡೋ ಏನೋ ಅವರ ಮಗಳೊಮ್ಮೆ 'ನಾವಿದನ್ನು ಮನೆಯಲ್ಲಿಟ್ಟುಕೊಂಡು ಸಾಕೋಣವಾ ಅಪ್ಪಾ?' ಎಂದು ಕೇಳಿದಳು. ಅವಳನ್ನೊಮ್ಮೆ ತಬ್ಬಿ ಮುದ್ದಾಡಲೇ ಎನ್ನುವಷ್ಟು ಖುಷಿಯಾಯಿತು. ಅಪ್ಪನ ಉತ್ತರಕ್ಕೆ ಕಾಯುತ್ತಿದ್ದೆ. ಅವಳ ಅಪ್ಪ 'ನೋಡಮ್ಮಾ.. ನೀನು ಬರೋದು ವಾರಕ್ಕೆ ಒಂದು ದಿನ ಮಾತ್ರ. ನಾವು ಇದನ್ನು ಮನೆಯಲ್ಲಿಟ್ಟುಕೊಂಡರೆ, ಅದರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳುವವರು ಯಾರು? ನಾವು ಬೆಳಿಗ್ಗೆ ಸ್ಟುಡಿಯೋಗೆ ಹೋದರೆ, ಮಧ್ಯಾಹ್ನ ಬಂದರೂ ಬರಬಹುದು ಅಥವಾ ರಾತ್ರಿಯೇ ಬರಬೇಕಾಗಬಹುದು. ಅಲ್ಲಿಯವರೆಗೆ ಈ ಬೆಕ್ಕನ್ನು ಮನೆಯಲ್ಲಿ ಕೂಡಿಟ್ಟು ಏನು ಮಾಡುವುದು? ಈಗಾದರೋ ಅದು ಸ್ವತಂತ್ರ ಜೀವಿ. ಎಲ್ಲಿ ಬೇಕಾದಲ್ಲಿ ಸುತ್ತಿಕೊಂಡು ಇರುತ್ತದೆ. ಆದ್ದರಿಂದ ಸಾಕುವುದು ಆಗದ ವಿಷಯ' ಎಂದು ಠರಾವು ಹೊರಡಿಸಿಬಿಟ್ಟರು.
ನನಗಾಗ ಆ ಮನುಷ್ಯ ವಿಲನ್ ಥರ ಕಂಡದ್ದಂತೂ ನಿಜ. ಆದರೆ ನಿಜವಾದ ಖಳನಾಯಕರ ಪರಿಚಯ ಮುಂದಿನ ದಿನಗಳಲ್ಲಿ ನನಗಾಯಿತು. ಅದನ್ನು ಮುಂದೊಮ್ಮೆ ಹೇಳುತ್ತೇನೆ. ಅಂದ ಹಾಗೆ ನನ್ನ ಬಾಲ್ಯದ ದಿನಗಳ ವಿಡಿಯೋವನ್ನು ಇವರು ಮೊಬೈಲ್ನಲ್ಲಿ ಸೆರೆಹಿಡಿದು ನನಗೆ ತೋರಿಸಿದ್ದರು. ನಾಳೆ ನಿಮಗೂ ತೋರಿಸಲು ಹೇಳುತ್ತೇನೆ. ಶುಭರಾತ್ರಿ.

No comments:
Post a Comment